ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ

ಕೋವಿಡ್ 19ನ ಸಾಂಕ್ರಾಮಿಕ ಪಿಡುಗು ಒತ್ತಡ, ಭಯ ಮತ್ತು ಆತಂಕಗಳನ್ನು ಸೃಷ್ಟಿಸಿದ್ದು, ಇಂತಹವರಿಗೆ ವೃತ್ತಿಪರ ಮಾನಸಿಕ ತಜ್ಞರಿಂದ ಸಲಹೆಯನ್ನು ಪಡೆದುಕೊಳ್ಳಲು ಒಂದು ಸಹಾಯವಾಣಿಯನ್ನು ಭಾರತ ಸರ್ಕಾರದ ಅಣತಿಯಂತೆ ತೆರೆಯಲಾಗಿದೆ ಎಂಬ ಒಕ್ಕಣೆಯ ಒಂದು  ಸಂದೇಶ ನನ್ನ  ಮೇಸೇಜ್ ಬಾಕ್ಸಿಗೆ ಬಂದಾಗ ನಾನು ಈ ಹಿಂದೆ ಈ ಬ್ಲಾಗ್ ನಲ್ಲಿ ಹಾಕಿರುವ ಅನೇಕ ಶ್ಲೋಕಗಳು ನೆನಪಿಗೆ ಬಂತು.  ಅಷ್ಟೇ ಅಲ್ಲದೆ, ಈ ಶ್ಲೋಕಗಳನ್ನು ಹೇಳುವುದರಿಂದ ಅಥವಾ ಗಮನವಿಟ್ಟು ಕೇಳುವುದರಿಂದ ಭಯ, ಆತಂಕಗಳ ನಿವಾರಣೆಯಾಗುವುದು ಎಂದು ಹೇಳಿದ್ದೂ ಸಹಾ ನೆನಪಿಗೆ ಬಂತು.

ಈ ಶ್ಲೋಕಗಳು ” ರೋಗಾನ ಶೇಷಾನ ’ ಅಥವಾ ’ಸರ್ವಬಾಧಾ ಪ್ರಶಮನಂ“, ಇಂದ್ರಾಕ್ಷೀ ಸ್ತೋತ್ರ, ಶಿವ ಕವಚ’ ’ ಲಲಿತಾ ಸಹಸ್ರನಾಮ, ವಿಷ್ಣು ಸಹಸ್ರನಾಮ ಯಾವುದಾದರೂ ಅಗಬಹುದು.

ಈ ಸ್ತ್ರೋತ್ರಗಳ ಪಠನ / ಶ್ರವಣ ಗಳಿಂದ ವೈರಸ್ನ ಬಾಧೆ ತಾಗದಿರುವುದು ಅಥವಾ ನಿವಾರಣೆಯಾಗುವುದು ವೈಜ್ಞಾನಿಕ ಮಾನದಂಡಗಳಿಂದ ಸಾಬೀತು ಪಡಿಸಲು ಸಾಧ್ಯವಿಲ್ಲವಾದರೂ, ಈ ಸ್ತೋತ್ರಗಳ ಪಠನೆ ಅಥವಾ ಶ್ರವಣದಿಂದ, ಭಯ , ಆತಂಕ ಮತ್ತು ಒತ್ತಡಗಳು ನಿವಾರಣೆಯಾಗಲು ಖಂಡಿತಾ ಸಾಧ್ಯ. ಇದನ್ನು ಪ್ರತಿಯೊಬ್ಬರೂ ತಮ್ಮ ಅನುಭವದಿಂದ ಮಾತ್ರ ಸಾಬೀತು ಪಡಿಸಬಹುದಷ್ಟೆ.

(https://youtube.com/user/jsdpani and playlist – https://www.youtube.com/playlist?list=PLItQtvWDzlrKQ83eAm0LSO8-E2HCUQAkA)

 ಲೋಕಾ ಸಮಸ್ತಾ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು

 

 

#

No responses yet

    Leave a Reply

    Your email address will not be published. Required fields are marked *