ಶ್ರೀ ಗುರುಭ್ಯೋ ನಮಃ   ಶ್ರೀ ಪರಮ ಗುರುಭ್ಯೋ ನಮಃ  ಶ್ರೀ ಪರಮೇಷ್ಠಿ ಗುರುಭ್ಯೋ ನಮಃ

ತಿಥಿನಿತ್ಯಾ ದೇವಿಯರ ಧ್ಯಾನಶ್ಲೋಕಗಳನ್ನು ಮುಂದುವರೆಸುತ್ತಾ ಈ ದಿನ ಶುಕ್ಲ ಚತುರ್ದಶಿ -ನಿತ್ಯಾದೇವತೆ ಜ್ವಾಲಾಮಾಲಿನಿ- ನಾಳಿದ್ದು   ಕೃಷ್ಣ ದ್ವಿತೀಯ – ಜ್ವಾಲಾಮಾಲಿನಿ ನಿತ್ಯಾದೇವತೆ. ಹಾಗಾಗಿ ಈ ದಿನ ಜ್ವಾಲಾಮಾಲಿನಿ ನಿತ್ಯಾ ದೇವಿಯ ಧ್ಯಾನಶ್ಲೋಕವನ್ನು ಹೇಳಿದ್ದು ಆಸಕ್ತರು, ಧ್ಯಾನಶ್ಲೋಕದ ಪ್ರಯೋಜನ ಪಡೆಯಬಹುದು.

14- 2 ಶುಕ್ಲ ಪಕ್ಷ ಚತುರ್ದಶಿ ಮತ್ತು ಕೃಷ್ಣ ಪಕ್ಷ ದ್ವಿತೀಯ – ಶ್ರೀ ಜ್ವಾಲಾಮಾಲನಿ ನಿತ್ಯಾದೇವಿ ಧ್ಯಾನಶ್ಲೋಕ:

ಜ್ವಲಜ್ವಲನ ಸಂಕಾಶಾಂ ಮಾಣಿಕ್ಯಮುಕುಟೋಜ್ವಲಾಂ

ಷಡ್ವಕ್ತ್ರಾಂ ದ್ವಾದಶಭುಜಾಂ ಸರ್ವಾಭರಣಭೂಷಿತಾಂ

ಪಾಶಾಂಕುಶೌ ಖಡ್ಗಖೇಟೌ ಚಾಪಬಾಣೌ ಗದಾದರೌ

ಶೂಲವನ್ಹೀ ವರಾಭೀತಿ ದಧನಾಂ ಕರಪಂಕಜೈ

ಸ್ವಪ್ರಮಾಣಾಭಿಸಹಿತಃ ಶಕ್ತಿಭಿಃ ಪರಿವಾರಿತಾಂ

ಚಾರುಸ್ಮಿತಲದ್ವಕ್ತ್ರಸರೋಜಾಂ  ತ್ರೀಕ್ಷಣಾನ್ವಿತಾಂ

ಧಗಧಗನೆ ಜ್ವಲಿಸುತ್ತಿರುವ ಅಗ್ನಿಗೆ ಸಮಾನವಾಗಿ ಹೊಳೆಯುತ್ತಾ ಮಾಣಿಕ್ಯಮಯವಾದ ಕಿರೀಟಧರಿಸಿ ಪ್ರಕಾಶಿಸುತ್ತಿರುವ, ಆರು ಮುಖಗಳು ಹನ್ನೆರಡು ಭುಜಗಳನ್ನು ಹೊಂದಿರುವ ಸರ್ವ ಆಭರಣಗಳಿಂದ ಅಲಂಕೃತಳಾಗಿ, ಪದ್ಮದಂತೆ ಇರುವ ಹಸ್ತಗಳಲ್ಲಿ ಪಾಶ,ಅಂಕುಶ.ಖಡ್ಗ,ಕವಚ,ದನುಸ್ಸು,ಬಾಣ,ಗದೆ, ತ್ರಿಶೂಲ, ಶೂಲ, ಶಂಖ ಮತ್ತು  ಬೆಂಕಿ ಯನ್ನು ಧರಿಸಿ, ತನ್ನಷ್ಟೇ ಇರುವ ಪರಿವಾರ ಶಕ್ತಿಗಳಿಂದ ಸುತ್ತುವರೆದು,  ಪ್ರಕಾಶಮಾನವಾದ ಪದ್ಮಗಳಂತಿರುವ ಆರು ಮುಖಗಳಲ್ಲೂ ಮೂರು ಮೂರು ಕಣ್ಣುಗಳಿಂದ ಪ್ರಕಾಶ ಬೀರುತ್ತಾ    ದಿವ್ಯಮಂದಹಾಸವನ್ನು ಚೆಲ್ಲಿ,  ಅಭಯಮುದ್ರೆ ಯಿಂದ ಭಕ್ತರಿಗೆ ಅಭಯವನ್ನು ನೀಡುತ್ತಿದ್ದಾಳೆ.

ದೇವಿಯ ಜ್ವಾಲಾಮಾಲಿನೀ  ರೂಪಕಲ್ಪನೆಯ ಚಿತ್ರವನ್ನು ಯೂಟ್ಯೂಬ್ ಲಿಂಕಿನಲ್ಲಿ ಕಾಣಬಹುದು

ಈ ಮುಂದಿನ ಶ್ಲೋಕಗಳು ಶ್ರೀ ಜ್ವಾಲಾಮಾಲಿನೀ  ನಿತ್ಯಾದೇವಿಯ ಯಂತ್ರ ರಚನೆಯನ್ನು ಹೇಳಿವೆ; ಈ ಯಂತ್ರದ ಚಿತ್ರವನ್ನೂ ಸಹಾ ಯೂಟ್ಯೂಬ್ ನಲ್ಲಿ ಕಾಣಬಹುದು.

ಧ್ಯಾತ್ವ್ಯೈಮುಪಚಾರೈ ಸ್ತೈರರ್ಚಯೇತ್ತಾಂ ತ ನಿತ್ಯಶಃ

ಚತುರಸ್ರದ್ವಯಂ ಕೃತ್ವಾ ಚತುರ್ದ್ವಾರ ಸಮನ್ವಿತಾಂ

ಸಶಾಖಮಷ್ಟಪತ್ರಾಬ್ಜಮಂತರಾತ್ರ್ಯಸ್ರಕಂ ತ ತಃ

ಷಟ್ಕೋಣಂ ಮಧ್ಯತಸ್ತ್ರ್ಯಸ್ರಂ ವಿಧಾಯಾಂತ್ರ ಶಿವಾಂ ಯಜೇತ್

ನಾಲ್ಕು ದ್ವಾರಗಳ ಎರಡು ಚತುರಸ್ರ ಮಂಡಲವನ್ನು ರಚಿಸಿ ಅದರೊಳಗೆ ಶಾಖೆಗಳ ಸಹಿತವಾದ ಅಷ್ಟದಳ ಪದ್ಮವನ್ನು ಬಿಡಿಸಿ ಅದರೊಳಗೆ ತ್ರಿಕೋಣಾಂತರ್ಗತವಾದ ಷಟ್ಕೋಣವನ್ನು ರಚಿಸಿ, ತ್ರಿಕೋಣ ಮಧ್ಯದಲ್ಲಿ ಜ್ವಾಲಾಮಾಲಿನಿ ದೇವಿಯನ್ನು ಪೂಜಿಸಬೇಕು.

ಉಳಿದ ೧೪ ತಿಥಿ ನಿತ್ಯ ದೇವಿಯರ ಧ್ಯಾನಶ್ಲೋಕದ ಬ್ಲಾಗ್ನ ಕೊಂಡಿಗಳು:

1-15 ಶ್ರೀ ಕಾಮೇಶ್ವರೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:

2-14 ಶ್ರೀ ಭಗಮಾಲಿನೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:

3-13 ಶ್ರೀ ನಿತ್ಯಕ್ಲಿನ್ನಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:

4-12 ಶ್ರೀ ಭೇರುಂಡಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:

5-11 ಶ್ರೀ ವಹ್ನಿವಾಸಿನೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:

6-10 ಶ್ರೀ ವಜ್ರೇಶ್ವರೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:

7-9 ಶ್ರೀ ಶಿವಾದೂತೀ ಅಥವಾ ಶಿವದೂತೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:

8-8 ಶ್ರೀ ತ್ವರಿತಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:

9-7 ಶ್ರೀ ಕುಲಸುಂದರೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ

10-6 ಶ್ರೀ ನಿತ್ಯಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ

11-5 ಶ್ರೀ ನೀಲಪತಾಕಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:

12-4 ಶ್ರೀ ವಿಜಯಾ ನಿತ್ಯಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:

13-3 ಶ್ರೀ ಸರ್ವಮಂಗಳಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:

15-1 ಶ್ರೀ ಚಿತ್ರಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:

ಓಂ ಶಾಂತಿಃ ಶಾಂತಿಃ ಶಾಂತಿಃ

ಧ್ಯಾನ ಶ್ಲೋಕ ಯೂಟ್ಯೂಬ್ ಕೊಂಡಿ:

#