ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ
13-3 ಶುಕ್ಲ ಪಕ್ಷದ ತ್ರಯೋದಶಿ ಹಾಗೂ ಕೃಷ್ಣಪಕ್ಷದ ತೃತೀಯಾ – ಶ್ರೀ ಸರ್ವಮಂಗಳಾ ನಿತ್ಯಾದೇವಿ ಧ್ಯಾನ ಶ್ಲೋಕ:
ತಾಂ ನಿತ್ಯಾಂ ಜಾತ ರೂಪಾಭಾಂ ಮುಕ್ತಾಮಾಣಿಕ್ಯಭೂಷಣಾಂ
ಮಾಣಿಕ್ಯ ಮುಕುಟಾಂ ನೇತ್ರದ್ವಯಪ್ರೇಂಖದ್ದಯಾಪರಾಂ
ದ್ವಿಭುಜಾಂ ಸ್ವಾಸನಾಂ ಪದ್ಮೇ ತ್ವಷ್ಟಷೋಡಶತದ್ವಯೈಃ
ಪತ್ತೈರುಪೇತೇ ಸಚತುರ್ದ್ವಾರಭೂಸದ್ಮಯುಗ್ಮಕೇ
ಮಾತುಲುಂಗಫಲಂ ದಕ್ಷೇ ದಧಾನಾಂ ಕರಪಂಕಜೇ
ವಾಮೇನ ನಿಜಭಕ್ತಾನಾಂ ಪ್ರಯಚ್ಚಂತೀಂ ಧನಾದಿಕಂ
ಸ್ವಸಮಾನಾಭಿರಭಿತಃ ಶಕ್ತಿಭಿಃ ಪರಿವಾರಿತಾಂ
ನಾಲ್ಕು ದ್ವಾರಗಳುಳ್ಳ ಚತುರಸ್ರ ಮಂಡಲದಲ್ಲಿ ಅಷ್ಟದಳ ಪದ್ಮಾಂತರ್ಗತ ಎರಡು ಷೋಡಶದಳ, ಅಂದರೆ 32 ದಳದ ಪದ್ಮದಲ್ಲಿ ಸುಖಾಸೀನಳಾದ ಬಂಗಾರದಂತೆ ಹೊಳೆಯುತ್ತಿರುವ, ಮಾಣಿಕ್ಯಗಳಿಂದ ತುಂಬಿರುವ ಆಭರಣಗಳನ್ನು ಧರಿಸಿರುವ, ಮಾಣಿಕ್ಯ ಕಿರೀಟವನ್ನು ಧರಿಸಿ, ಕಣ್ಣುಗಳಿಂದ ದಯಾರಸವನ್ನೇ ಬೀರುತ್ತಾ, ಬಲಗೈಯಲ್ಲಿ ಮಾತುಲುಂಗ ಫಲವನ್ನು ಹಿಡಿದು, ಎಡಗೈಯಿಂದ ತನ್ನ ಭಕ್ತರಿಗೆ ಧನಾದಿಗಳನ್ನು ಅನುಗ್ರಹಿಸುತ್ತಾ ತನ್ನ ಸುತ್ತಲೂ ತನಗೆ ಸಮಾನರಾದ ಶಕ್ತಿ ಪರಿವಾರದಿಂದೊಡ ಗೂಡಿರುವ ಸರ್ವಮಂಗಳಾ ನಿತ್ಯಾ ದೇವಿಯನ್ನು ದ್ಯಾನಿಸುತ್ತಿದ್ದೇವೆ.
ಶ್ರೀ ಸರ್ವಮಂಗಳಾ ನಿತ್ಯೆಯ ಪರಿವಾರವು 76 ಶಕ್ತಿದೇವತೆಗಳಿಂದ ಕೂಡಿದೆ ಎಂದು ಸಹಾ ಹೇಳಲಾಗುತ್ತದೆ. ಸರ್ವಮಂಗಳಾ ನಿತ್ಯೆಯು ಸೂರ್ಯನ 12 ಕಲೆಗಳ, ಚಂದ್ರನ 16 ಕಲೆಗಳ ಮತ್ತು ಅಗ್ನಿಯ 10 ಕಲೆಗಳ ಮೇಲಿನ ಆಧಿಪತ್ಯವನ್ನು ಹೊಂದಿದ್ದು ಈ ಶಕ್ತಿದೇವತೆಗಳು ತಂತಮ್ಮ ಸಂಗಾತಿಯರೊಂದಿಗೆ 76 ಶಕ್ತಿದೇವತೆಗಳಾಗಿದ್ದಾರೆ.
ದೇವಿಯ ಚಿತ್ರಪಟ ಮತ್ತು ಯಂತ್ರ ಇಲ್ಲಿ ಹೇಳಿರುವ ಧ್ಯಾನ ಶ್ಲೋಕಕ್ಕೆ ಸ್ವಲ್ಪಮಟ್ಟಿಗೆ ಹೊಂದಿಕೆ ಆಗುತ್ತಿಲ್ಲಾ. ಇಲ್ಲಿನ ಧ್ಯಾನ ಶ್ಲೋಕವನ್ನು ಬೃಹನ್ನಾರದೀಯ ಪುರಾಣದಿಂದ ತೆಗೆದುಕೊಳ್ಳಲಾಗಿದೆ.
ಉಳಿದ ೧೪ ತಿಥಿ ನಿತ್ಯ ದೇವಿಯರ ಧ್ಯಾನಶ್ಲೋಕದ ಬ್ಲಾಗ್ನ ಕೊಂಡಿಗಳು:
1-15 ಶ್ರೀ ಕಾಮೇಶ್ವರೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
2-14 ಶ್ರೀ ಭಗಮಾಲಿನೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
3-13 ಶ್ರೀ ನಿತ್ಯಕ್ಲಿನ್ನಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
4-12 ಶ್ರೀ ಭೇರುಂಡಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
5-11 ಶ್ರೀ ವಹ್ನಿವಾಸಿನೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
6-10 ಶ್ರೀ ವಜ್ರೇಶ್ವರೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
7-9 ಶ್ರೀ ಶಿವಾದೂತೀ ಅಥವಾ ಶಿವದೂತೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
8-8 ಶ್ರೀ ತ್ವರಿತಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
9-7 ಶ್ರೀ ಕುಲಸುಂದರೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ
10-6 ಶ್ರೀ ನಿತ್ಯಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ
11-5 ಶ್ರೀ ನೀಲಪತಾಕಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
12-4 ಶ್ರೀ ವಿಜಯಾ ನಿತ್ಯಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
14-2 ಶ್ರೀ ಜ್ವಾಲಾಮಾಲಿನೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
15-1 ಶ್ರೀ ಚಿತ್ರಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
ಓಂ ಶಾಂತಿಃ ಶಾಂತಿಃ ಶಾಂತಿಃ
6 Responses
[…] […]
[…] […]
[…] […]
[…] […]
[…] […]
[…] […]