ಗುರುಬ್ರಹ್ಮಾ ಗುರುರ್ವಿಷ್ಣುಃ ಗುರುದೇವೋ ಮಹೇಶ್ವರಃ ಗುರುಃ ಸಾಕ್ಷಾತ್ ಪರಂಬ್ರಹ್ಮ ತಸ್ಮೈ ಶ್ರೀಗುರವೇ ನಮಃ

ದೀಪಾವಳಿಯ ಆಚರಣೆಯ ಸಲುವಾಗಿ. ಕಳೆದೆರಡು ಮೂರು ದಿನಗಳಿಂದ ಆರಂಭವಾದ ಮನೆಯನ್ನು ಸ್ವಚ್ಚ ಗೊಳಿಸುವ ಕಾರ್ಯ ಮುಗಿದಿದೆ. ಈಗ ಹಬ್ಬದ ಆಚರಣೆಯ ಸಡಗರ.

ಮನೆ ಮತ್ತು ಮನ ಇವೆರೆಡನ್ನೂ ಸ್ವಚ್ಚವಾಗಿರಿಸುವ ಕಾರ್ಯ ನಿರಂತರವಾಗಿ ಸಾಗಬೇಕು. ಅದು ಬಹಳ ಸುಲಭ. ಪ್ರತಿದಿನ ಮನೆಯ ಸ್ವಚ್ಚತೆಗೆ ಗಮನ ಕೊಟ್ಟರ ಸಾಕು ಅದು ಸದಾ ಸ್ವಚ್ಚವಾಗಿರುತ್ತದೆ. ಸ್ವಚ್ಚವಾದ ಆಲೋಚನೆಗಳು ಸಾಕು, ಮನವನ್ನು ಚೊಕ್ಕಟವಾಗಿರಿಸಲು. ಮನಃಶಾಸ್ತ್ರಜ್ಞರು ಒಪ್ಪಲಿ ಬಿಡಲಿ, ಮನಸ್ಸು ಎಂಬುದು ನಮ್ಮ ಆಲೋಚನೆಗಳ ಸೃಷ್ಟಿಯಷ್ಟೇ. ಅದಕ್ಕೆ ಸ್ವಂತ ಅಸ್ಥಿತ್ವವೇ ಇಲ್ಲಾ ಎನ್ನುತ್ತಾರೆ ದಾರ್ಶನಿಕರು.

ಅಭ್ಯಂಗಸ್ನಾನ ಆಯಿತು, ಅದೊಂದು ಹಿತವಾದ ಅನುಭವ.ಹೊಸತನ ಹೊಸ ಹುರುಪು ಮತ್ತು ಸಕಾರಾತ್ಮಕ ಚಿಂತನೆಗಳ ಕುರುಹಾಗಿ ಹೊಸ ಉಡುಗೆ ಧರಿಸಿ ಆಯಿತು.

ಪಟಾಕಿಗಳ ಕಣ್ಣು ಕೋರೈಸುವ ಬೆಳಕು, ಕಿವುಡಾಗುವಷ್ಟು ಶಬ್ಧ, ಇವಕ್ಕೆ ಹೆದರಿಯಾದರೂ, ನಮ್ಮೊಳಗಿನ ಅಸುರೀ ಶಕ್ತಿಗಳ ದಮನ ವಾಗಬೇಕು.  . ದೀಪ ಬೆಳಗಿ ಸಂಭ್ರಮಿಸಲು ಕತ್ತಲಾಗಬೇಕು. ಜ್ಞಾನ ದೀವಿಗೆ ಪ್ರಜ್ವಲಿಸಿದರೆ ಕತ್ತಲೆಯ ಸುಳಿವೇ ಇಲ್ಲಾ. ಕತ್ತಲಿಲ್ಲ ನಿಜ ಆದರೆ ಆ ಪ್ರಕಾಶದ ಅನುಭವ ಆಗಬೇಕು.ಅನುಭವ ಆಗದ ಜ್ಞಾನಕ್ಕೂ ಅಜ್ಞಾನಕ್ಕೂ ಹೆಚ್ಚಿನ ವ್ಯತ್ಯಾಸ ಇರಲಾರದು. . ,

ಶ್ರೀ ವಿದ್ಯಾರಣ್ಯ ಸ್ವಾಮಿಯವರಿಂದ ಆರಂಭವಾದ ಗುಹಾನಂದ ಪರಂಪರೆಯ ಎಲ್ಲಾ ಗುರುವರ್ಯರ ಸಂಪೂರ್ಣ ಅನುಗ್ರಹದ ಶ್ರೀರಕ್ಷೆ ಯಲ್ಲಿ ಬೆಳಕನ್ನು ಅನುಭವಿಸಲು ಸಾಗೋಣ, ಚಿ ಉದಯಶಂಕರರ ಕವಿತೆಯ ಆಶಯದಂತೆ ಬೆಳದಿಂಗಳ ಮಳೆಯಲ್ಲಿ ನಡೆಯುವ ಅನುಭವ ನಮ್ಮದಾಗಲಿ.

Om Asato Maa Sad-Gamaya |
Tamaso Maa Jyotir-Gamaya |
Mrtyor-Maa Amrtam Gamaya |
Om Shaantih Shaantih Shaantih ||.

ಓಂ ಶಬ್ಧದಲ್ಲಿ ಅಡಗಿರುವ ಮಹಾಚೈತನ್ಯವು ನಮ್ಮನ್ನು ಅವಾಸ್ತವಿಕತೆಯ ಅಸಾಧಾರಣ ಪ್ರಪಂಚದಿಂದ, ವಾಸ್ತವದ ಕಡೆಗ , ಶಾಶ್ವತವಾದ  ಆತ್ಮನ ಕಡೆಗೆ  ನಡೆಸಲಿ.

2: ಅಜ್ಞಾನದ ಕಾರ್ಗತ್ತಲಿನಿಂದ, ಬೆಳಕಿನ ಕಡೆಗೆ, ಆಧ್ಯಾತ್ಮಿಕ ಜ್ಞಾನದ ಕಡೆಗೆ ನಡೆಸಲಿ

3:ಮರಣದ ಅಂದರೆ,  ವಸ್ತುವಿನ ಬಾಂಧವ್ಯದ ಪ್ರಪಂಚದಿಂದ, ಅಮರತ್ವದ,ಸ್ವಯಂ-ಸಾಕ್ಷಾತ್ಕಾರದ,ಪ್ರಪಂಚದ ಕಡೆಗೆ ಕರೆದೊಯ್ಯಲಿ.

ಪ್ರತಿದಿನ ಪ್ರತಿಕ್ಷಣ ದೀಪಾವಳಿಯ ಆಚರಣೆ ಆಗುತ್ತಲೇ ಇರಲಿ.ಅದು ನಿರಂತರ.

ಸರ್ವೇಜನಾಃ ಸುಖಿನೋಭವಂತು ಸಮಸ್ತ ಸನ್ಮಂಗಳಾನಿ ಭವಂತು

ಓಂ, ಶಾಂತಿ, ಶಾಂತಿ, ಶಾಂತಿ.

#

No responses yet

    Leave a Reply

    Your email address will not be published. Required fields are marked *