ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ
ತಿಥಿನಿತ್ಯಾ ದೇವಿಯರ ಬಗ್ಗೆ ತಿಳಿಯದ ಶ್ರೀ ವಿದ್ಯಾ ಉಪಾಸಕರು ಇರಲು ಸಾಧ್ಯವಿಲ್ಲಾ. ಹಾಗಾಗಿ ತಿಥಿನಿತ್ಯಾ ದೇವತೆಯರ ಬಗ್ಗೆ ಹೆಚ್ಚು ವಿವರಣೆ ಕೊಡದೆ, ಸನತ್ಕುಮಾರರು, ನಾರದರಿಗೆ ಹೇಳಿರುವ, ತಿಥಿನಿತ್ಯಾ ದೇವತೆಯರ ಧ್ಯಾನಶ್ಲೋಕಗಳು ಮತ್ತು ಅವುಗಳ ಕನ್ನಡ ತಾತ್ಪರ್ಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ತಿಥಿನಿತ್ಯಾ ದೇವಿಯರ ಬಗ್ಗೆ ನಿರ್ದಿಷ್ಟ ಮಾಹಿತಿ ಬೇಕಿದ್ದಲ್ಲಿ ನನ್ನ ಗಮನಕ್ಕೆ ತಂದರೆ, ನನ್ನ ಶ್ರೀ ವಿದ್ಯಾ ಗುರುಗಳ ಮತ್ತು ಗುರುಮಂಡಲದ ಅನುಗ್ರಹದಿಂದ ನನಗೆ ತಿಳಿದಿರುವುದನ್ನು ಹಂಚಿಕೊಳ್ಳುತ್ತೇನೆ. ಶುಕ್ಲ ಪಾಡ್ಯದಿಂದ ಪೌರ್ಣಮಿ ವರೆಗಿನ 15 ತಿಥಿಗಳಿಗೆ, ಹಾಗೆಯೇ ಕೃಷ್ಣ ಪಾಡ್ಯ ದಿಂದ ಅಮಾವಾಸ್ಯೆ ಯವರೆಗಿನ 15 ತಿಥಿಗಳಿಗೆ 15 ತಿಥಿನಿತ್ಯಾ ದೇವಿಯರು. ಶುಕ್ಲ ಪಾಡ್ಯ ಮತ್ತು ಅಮಾವಾಸ್ಯೆ ತಿಥಿಯ ದೇವತೆ ಶ್ರೀ ಕಾಮೇಶ್ವರೀ ನಿತ್ಯಾ. ಶ್ರೀ ವಿದ್ಯಾ ಉಪಾಸಕರಲ್ಲದವರೂ ಸಹಾ ತಿಥಿನಿತ್ಯಾ ದೇವತೆಯರ ಧ್ಯಾನಶ್ಲೋಕಗಳನ್ನು ಅಯಾಯ ತಿಥಿಗಳಂದು ಧ್ಯಾನ ಮಾಡುವ ಮೂಲಕ ದೇವಿಯ ಕೃಪೆಗೆ ಪಾತ್ರರಾಗಬಹುದು
1-15 ಶುಕ್ಲ ಪಕ್ಷ ಪಾಡ್ಯ ಮತ್ತು ಕೃಷ್ಣ ಪಕ್ಷ ಅಮಾವಾಸ್ಯೆ – ಶ್ರೀ ಕಾಮೇಶ್ವರೀ ನಿತ್ಯಾ ಧ್ಯಾನಶ್ಲೋಕ:
ಬಾಲಾರ್ಕಕೋಟಿಸಂಕಾಶಾಮ್ ಮಾಣಿಕ್ಯಮುಕುಟೋಜ್ವಲಾಂ
ಹಾರಗ್ರೈವೇಯ ಕಾಂಚಿಭಿರೂರ್ಮಿ ಕಾನು ಪುರಾದಿಭಿಃ
ಮಂಡಿತಾಂ ರಕ್ತವಸನಾಮ್ ರತ್ನಾಭರಣ ಶೋಭಿತಾಮ್
ಷಡ್ಭುಜಾಂ ತ್ರೀಕ್ಷಣಾಮಿಂದುಕಲಾಕಲಿತಮೌಲಿಕಾಂ
ಪಂಚಾಷ್ಟಷೋಡಶದ್ವಂದ್ವಷಟ್ಕೋಣಚತುರಸ್ರಗಾಂ
ಮಂದಸ್ಮಿತಲಸದ್ವಕ್ತ್ರಾಂ ದಯಾಮಂಥರವೀಕ್ಷಣಾಂ
ಪಾಶಾಂಕುಶೌ ಚ ಪುಂಡ್ರೇಕ್ಷುಚಾಪಂ ಪುಷ್ಪಶೀಲೀ ಮುಖಂ
ರತ್ನಪಾತ್ರಂ ಸೀಧುಪೂರ್ಣಂ ವರದಂ ಬಿಭ್ರತೀಂ ಕರೈಃ
ತತಃ ಪ್ರಯೋಗಾನ್ಕುರ್ವೀತ ಸಿದ್ಧೇ ಮಂತ್ರೇ ತು ಸಾಧಕಃ
ಕೋಟ್ಯಂತರ ಅಂದರೆ ಅಸಂಖ್ಯಾತ ಬಾಲಸೂರ್ಯರಂತೆ ಹೊಳೆಯುತ್ತಿರುವ, ಮಾಣಿಕ್ಯದ ಕಿರೀಟದಿಂದ ಶೋಭಿತೆಯಾಗಿ, ಹಾರ, ಅಡ್ದಿಗೆ, ಡಾಬು, ಉಂಗುರ ಮುಂತಾದುವುಗಳಿಂದ ಅಲಂಕೃತಗೊಂಡು,, ಕೆಂಪುವಸ್ತ್ರವನ್ನುಟ್ಟು, ರತ್ನಖಚಿತ ಆಭರಣಗಳನ್ನು ಧರಿಸಿ, ಆರು ಭುಜಗಳು, ಮೂರು ಕಣ್ಣುಗಳಿದ್ದು ಚಂದ್ರ ಕಲೆಯಿಂದ ಆವರಿಸಿಲ್ಪಟ್ಟ ಶಿರಸ್ಸನ್ನು ಹೊಂದಿ, 5, 8, 16, 2. ದಳ ಮತ್ತು 6 ಕೋನ ಗಳನ್ನು ಒಳಗೊಂಡ ಚತರಸ್ರ ಮಂಡಲದಲ್ಲಿ ಮಂದಹಾಸ ಮುಖದಿಂದ ವಿರಾಜಿಸುತ್ತಾ, ದಯಾಭೂತ ದೃಷ್ಟ ಉಳ್ಳವಳಾಗಿ, ಕರಗಳಲ್ಲಿ ಪಾಶ ಅಂಕುಶ ಪುಂಡ್ರ, ಕಬ್ಬನಜಲ್ಲೆಯ ಕಾಮನಬಿಲ್ಲು, ಪುಷ್ಪಬಾಣ, ಮಧ್ಯತುಂಬಿದ ರತ್ನಪಾತ್ರೆ, ವರದ ಮುದ್ರೆಯಿಂದ ಕಂಗೊಳಿಸುತ್ತಿದ್ದಾಳೆ ಎಂದು ಕಾಮೇಶ್ವರೀ ನಿತ್ಯಾದೇವಿಯ ರೂಪಕಲ್ಪನೆ ಮಾಡಿ ದ್ಯಾನಿಸಿದರೆ ಇದು ಸಿದ್ಧ ಮಂತ್ರ ವೇ ಆಗುತ್ತದೆ.
5, 8, 16, 2. ದಳ ಮತ್ತು 6 ಕೋನಗಳನ್ನು ಒಳಗೊಂಡ ಚತರಸ್ರ ಮಂಡಲದಲ್ಲಿ ಎಂದು ಹೇಳುವ ಮೂಲಕ ಶ್ರೀ ಕಾಮೇಶ್ವರಿ ನಿತ್ಯಾದೇವಿಯ ಯಂತ್ರವನ್ನು ವಿವರಿಸಿದೆ.
ಪಂಚಾಷ್ಟಷೋಡಶದ್ವಂದ್ವಷಟ್ಕೋಣಚತುರಸ್ರಗಾಂ
ಪಂಚ- ಐದು ದಳ, ಅಷ್ಟ- ಎಂಟು ದಳ ಷೋಡಶ ದ್ವಂದ್ವ ಅಂದರೆ 16 ದಳಗಳು ಎರಡು, ಇವೆಲ್ಲವೂ ಚತುರಸ್ರದಲ್ಲಿ ಅಂದರೆ ಚದರ ಅಥವಾ ಚಚ್ಚೌಕದಲ್ಲಿ ಇರುವ ಚಕ್ರಸ್ವರೂಪಿಣಿ. ದೇವಿಯ ಯಂತ್ರದಲ್ಲಿ ಇವೆಲ್ಲವನ್ನೂ ಗುರುತಿಸಬಹುದಾಗಿದೆ. ಆದರೆ ಮಧ್ಯದಲ್ಲಿ ಷಟ್ಕೋಣ ಕಾಣುತ್ತಿಲ್ಲಾ. ಮಧ್ಯದಲ್ಲಿ ಷಟ್ಕೋಣ ವನ್ನು ರಚಿಸಿದರೆ ತಪ್ಪಿಲ್ಲಾ.
ತಂತ್ರರಾಜ ತಂತ್ರದಲ್ಲಿನ ಧ್ಯಾನಶ್ಲೋಕ ದಲ್ಲಿ ಪಂಚಾಷ್ಟಷೋಡಶದ್ವಂದ್ವಷಟ್ಕೋಣಚತುರಸ್ರಗಾಂ ಎನ್ನುವ ಸಾಲು ಕಾಣುತ್ತಿಲ್ಲಾ. ಏಕೆ? ಹೇಗೆ? ಅದು ಸರಿ, ಇದು ಸರಿ ಎಂದು ವಾದ, ಚರ್ಚೆಗೆ ವ್ಯಯಮಾಡುವ ಸಮಯ ಮತ್ತು ಬುದ್ಧಿಯನ್ನು, ನಮಗೆ ಲಭ್ಯವಿರುವ ಮಾಹಿತಿಯಂತೆ ಮತ್ತು ಗುರುಗಳ ಮಾರ್ಗದರ್ಶನದಂತೆ ಸಂಪೂರ್ಣ ಶ್ರದ್ದೆ ಮತ್ತು ನಂಬಿಕೆಯಿಂದ, ಸಾಧನೆ ಯನ್ನು ಮಾಡುವುದು ಅತ್ಯಂತ ಶ್ರೇಷ್ಟ. ಹಾಗಾದಾಗ ತಪ್ಪುಗಳಿದ್ದಲ್ಲಿ ಆ ತಪ್ಪುಗಳನ್ನು ಸರಿಪಡಿಸುವ ಮತ್ತು ಸರಿಯಾದ ಮಾರ್ಗದರ್ಶನ ನೀಡುವ ಹೊಣೆ ಬ್ರಹ್ಮಾಂಡದ ಪ್ರಜ್ಞೆಯದಾಗಿದ್ದು, ಅದು ಸಕಾಲದಲ್ಲಿ ನಮ್ಮ ನೆರವಿಗೆ ಬರುವುದು ಸತ್ಯ, ಸತ್ಯ ಮತ್ತು ಸತ್ಯ. ಇದು “ಧೃಢ ಜ್ಞಾನ ಮಮ” ನನ್ನ ಧೃಢ ನಂಬಿಕೆ. ಮನೀಷಾ ಮಮ- ನನ್ನ ಪ್ರಾರ್ಥನೆ, ಬಯಕೆ. ಮನೀಷಾ ಮಮ – ನನ್ನ ಭಾವನೆ.
2-14 ಶ್ರೀ ಭಗಮಾಲಿನೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ
3-13 ಶ್ರೀ ನಿತ್ಯಕ್ಲಿನ್ನಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
4-12 ಶ್ರೀ ಭೇರುಂಡಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
5-11 ಶ್ರೀ ವಹ್ನಿವಾಸಿನೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
6-10 ಶ್ರೀ ವಜ್ರೇಶ್ವರೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
7-9 ಶ್ರೀ ಶಿವಾದೂತೀ ಅಥವಾ ಶಿವದೂತೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
8-8 ಶ್ರೀ ತ್ವರಿತಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
9-7 ಶ್ರೀ ಕುಲಸುಂದರೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ
10-6 ಶ್ರೀ ನಿತ್ಯಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ
11-5 ಶ್ರೀ ನೀಲಪತಾಕಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
12-4 ಶ್ರೀ ವಿಜಯಾ ನಿತ್ಯಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
13-3 ಶ್ರೀ ಸರ್ವಮಂಗಳಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
14-2 ಶ್ರೀ ಜ್ವಾಲಾಮಾಲಿನೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
15-1 ಶ್ರೀ ಚಿತ್ರಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
ಓಂ ಶಾಂತಿಃ ಶಾಂತಿಃ ಶಾಂತಿಃ
ಶ್ರೀ ಕಾಮೇಶ್ವರಿ ನಿತ್ಯೆಯ ಯಂತ್ರ ಮತ್ತು ರೂಪವಿರುವ ಧ್ಯಾನಶ್ಲೋಕ ಯೂಟ್ಯೂಬ್ ನ ಕೊಡಲಾಗಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
[contact-form][contact-field label=”Name” type=”name” required=”1″ /][contact-field label=”Email” type=”email” required=”1″ /][contact-field label=”Website” type=”url” /][contact-field label=”Comment” type=”textarea” required=”1″ /][/contact-form]
6 Responses
[…] […]
[…] […]
[…] […]
[…] […]
[…] […]
[…] […]